ಸಜಿಪನಡು: ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಬಂಟ್ವಾಳ : ಪವಿತ್ರ ಹಜ್ ಯಾತ್ರೆಗೆ ತೆರಳುವ ಸಜೀಪ ಕೇಂದ್ರ ಜುಮಾ ಮಸ್ಜಿದ್ ಖತೀಬ್ ಅಶ್ಫಾಕ್ ಫೈಝಿ, ಮಹಿಳಾ ಶರೀಅತ್ ಕಾಲೇಜ್ ಪ್ರಿನ್ಸಿಪಲ್ ಅಬ್ದುಲ್ ರಶೀದ್ ಅರ್ಶದಿ, ಧರ್ಮಗುರುಗಳಾದ ಅಬ್ದುಲ್ ಲತೀಫ್ ಮುಸ್ಲಿಯಾರ್, ಇಲ್ಯಾಸ್ ಅರ್ಷದಿ ಅವರನ್ನು ಜುಮಾ ನಮಾಝ್ ಬಳಿಕ ಸರಳ ಸಮಾರಂಭದಲ್ಲಿ ಶಾಲು ಹೊದಿಸಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಸ್.ಕೆ ಮುಹಮ್ಮದ್, ಉಪಾಧ್ಯಕ್ಷ ಆಸಿಫ್ ಕುನ್ನಿಲ್, ಮಾಜಿ ಅಧ್ಯಕ್ಷ ಹಾಜಿ ಎಸ್.ಅಬ್ಬಾಸ್, ಕೋಶಾಧಿಕಾರಿ ಅಬ್ದುಲ್ ಕರೀಂ ಹಾಜಿ ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ಅಬ್ದುಲ್ ಜಸೀಂ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
Next Story