ಸಯ್ಯದ್ ಮದನಿ ಅರಬಿಕ್ ಕಾಲೇಜು ಉಳ್ಳಾಲ: ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ
ಉಳ್ಳಾಲ: ಸಯ್ಯದ್ ಮದನಿ ಅರಬಿಕ್ ಕಾಲೇಜಿನ 2019-20ನೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಯಿತು.
ಮುಹಮ್ಮದ್ ತ್ವಾಹ ಹಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಶೈಖುನಾ ತೋಡಾರು ಉಸ್ಮಾನುಲ್ ಫೈಝಿ ಉಸ್ತಾದ್ ದುಆಶಿರ್ವಾಚನ ಗೈದು ಶಿಕ್ಷಣವು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ ಎಂದು ಹೇಳಿದರು.
ಸಯ್ಯದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜೊತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ ಹಾಗೂ ಹಾಜಿ ಇಲ್ಯಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ಈ ಸಂದರ್ಭ ಇಬ್ರಾಹೀಂ ಮದನಿ, ಇಬ್ರಾಹಿಂ ಅಹ್ಸನಿ, ಹಾಫಿಳ್ ಝೈನ್ ಸಖಾಫಿ, ಶರೀಫ್ ಮದನಿ, ಮುಫತ್ತಿಶ್ ಹನೀಫ್ ಸಖಾಫಿ ಉಪಸ್ಥಿತರಿದ್ದರು.
ಇಬ್ರಾಹಿಂ ಮದನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story