ಜು.23-24: ಎ.ಜೆ. ಆಸ್ಪತ್ರೆಯಲ್ಲಿ ತಪಾಸಣಾ ಶಿಬಿರ
ಮಂಗಳೂರು, ಜು.19: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರಿಂದ ಲಿವರ್ ಅಸ್ವಸ್ಥತೆಗಳ ತಪಾಸಣಾ ಶಿಬಿರವು ಜು.23,24ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ನಡೆಯಲಿದೆ.
ತಜ್ಞ ವೈದ್ಯರೊಂದಿಗೆ ಉಚಿತ ಸಮಾಲೋಚನೆ, ಶಿಬಿರಾರ್ಥಿಗಳಿಗೆ ಹೊರರೋಗಿ ತಪಾಸಣೆಗಳ ಮೇಲೆ ಶೇ.25 ರಿಯಾಯಿತಿ, ಎಂಡೋಸ್ಕೋಪಿ, ಕೊಲೊನೋಸ್ಕೋಪಿ, ಇ.ಆರ್.ಸಿ.ಪಿ.ತಪಾಸಣೆಗಳು ಹಾಗೂ ಒಳರೋಗಿ ಚಿಕಿತ್ಸೆಯ ಹಾಗೂ ಶಸ್ತ್ರಚಿಕಿತ್ಸೆಗಳ ಮೊತ್ತದ ಮೇಲೆ ರಿಯಾಯಿತಿ ನೀಡಲಾಗುವುದು.
ಆಲ್ಕೊಹಾಲಿಕ್ ಲಿವರ್ ಡಿಸೀಸ್, ಫ್ಯಾಟಿ ಲಿವರ್, ಡಯಾಬಿಟಿಸ್ ಹೈಪೆರ್ ಲಿಪಿಡೆಮಿಯಾ, ಹೈಪರ್ ಟೆನ್ಶನ್ ಮತ್ತು ಹೃದ್ರೋಗ ಅಸ್ವಸ್ಥತೆಗಳು, ಹೆಪಟೈಟಿಸ್ ಬಿ/ಸಿ ಲಿವರ್ ಅಸ್ವಸ್ಥತೆಗಳು, ಲಿವರ್ ಗಡ್ಡೆಗಳು, ಲಿವರ್ ಕಸಿ (ಟ್ರಾನ್ಸ್ಪ್ಲಾಂಟ್) ಬೊಜ್ಜಿನ ಸಮಸ್ಯೆವುಳ್ಳವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ಆಸಕ್ತರು ದೂ.ಸಂ: 0824 6613252/6613253ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story