ಕೊಣಾಜೆ: ಜುಮ್ಮಾ ನಮಾಝ್ ಹಾಗೂ ನೂತನ ಮದ್ರಸಾ ಕಟ್ಟಡಕ್ಕೆ ಚಾಲನೆ
ಕೊಣಾಜೆ: ಬಿಲಾಲ್ ಜುಮ್ಮಾ ಮಸೀದಿ ಮತ್ತು ಮದ್ರಸತುಲ್ ಬುಖಾರಿಯಾ ಪೊಟ್ಟೊಳಿಕೆಯಲ್ಲಿ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ರ ನೇತೃತ್ವದಲ್ಲಿ ಜುಮ್ಮಾ ನಮಾಝ್ ಶುಕ್ರವಾರ ಪ್ರಾರಂಭಿಸಲಾಯಿತು.
ಖುತುಬಾ ಹಾಗೂ ನಮಾಝಿಗೆ ಉಸ್ತಾದರು ನೇತ್ರತ್ವ ನೀಡಿದರು, ಮಸೀದಿಗಳು ಶಾಂತಿಯ ಕೇಂದ್ರ ಅನಗತ್ಯ ಚರ್ಚೆ ಗೊಂದಲಗಳನ್ನು ಮಸೀದಿ ಹಾಗೂ ಪರಿಸರದಲ್ಲಿ ನಡೆಸಬಾರದು ಪರಸ್ಪರ ಅನ್ಯೋನ್ಯತೆಯಿಂದ ಒಗ್ಗಟ್ಟಾಗಿ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕು ಮಾತುಗಳು, ಪರದೂಷಣೆ, ಕೆಟ್ಟ ಚಿಂತನೆಗಳಿಂದ ಮುಕ್ತವಾಗಿರಿಸಬೇಕೆಂದು ಕರೆ ನೀಡಿದರು.
ನಂತರ ನೂತನವಾಗಿ ನಿರ್ಮಿಸಿದ ಮದ್ರಸಾ ಕಟ್ಟಡಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬಿಲಾಲ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಸಲೀಂ,ಕಾರ್ಯದರ್ಶಿ ಹನೀಫ್ ,ಉಪಾಧ್ಯಕ್ಷ ಮೂಸ ಕುಂಞಿ, ಖತೀಬ್ ಅಮೀರ್ ಮದನಿ, ಸದರ್ ಮುಅಲ್ಲಿಂ ಹನೀಫ್ ಮುಸ್ಲಿಯಾರ್, ಕೇಂದ್ರ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾದ ಮೊಹಿದ್ದೀನ್ ಕುಂಞಿ ಬಸರ, ಅಬೂಬಕರ್ ಮದನಿ ಪಡಿಕ್ಕಲ್ ಭಾಗವಹಿಸಿದ್ದರು.
Next Story