ಪಾರಾ ಮೆಡಿಕಲ್ ಡಿಪ್ಲೊಮಾ ಪರೀಕ್ಷೆ: ಸಂಪಾಜೆಯ ಹಾರಿಸಾ ರಾಜ್ಯಕ್ಕೆ ಪ್ರಥಮ
ಸುಳ್ಯ, ಜು.31: ಪಾರಾ ಮೆಡಿಕಲ್ ಬೋರ್ಡ್ ಬೆಂಗಳೂರು ನಡೆಸಿದ 2018ನೇ ಸಾಲಿನ ಪಾರಾ ಮೆಡಿಕಲ್ ಡಿಪ್ಲೊಮಾ ವಾರ್ಷಿಕ ಪರೀಕ್ಷೆಯಲ್ಲಿ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಡಿಪ್ಲೊಮಾ ಇನ್ ಎಕ್ಸ್ರೇ ವಿಭಾಗದ ವಿದ್ಯಾರ್ಥಿನಿ ಹಾರಿಕಾ ಕೆ.ಎಚ್. ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಬುಧವಾರ ಬೆಂಗಳೂರಿನ ಬೆಂಗಳೂರು ಮೆಡಿಕಲ್ ಕಾಲೇಜು ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಜರುಗಿದ ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು.
ಹಾರಿಸಾ ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮದ ಕೊಯನಾಡು ಹಮೀದ್ ಮತ್ತು ಆಬಿದಾ ದಂಪತಿಯ ಪುತ್ರಿ.
Next Story