ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಅರ್ಧ ವಾರ್ಷಿಕ ಕೌನ್ಸಿಲ್
ಉಡುಪಿ, ಆ.5: ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿಯ ಅರ್ಧ ವಾರ್ಷಿಕ ಮಹಾಸಭೆ ಆ.3ರಂದು ಎಸ್ಸೆಸ್ಸೆಫ್ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬ್ಬೀರ್ ಸಖಾಫಿ ಪಣಿಯೂರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಾಜ್ಯ ಇಹ್ಸಾನ್ ಕನ್ವೀನರ್ ಅಲ್ಹಾಜ್ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಉದ್ಘಾಟಿಸಿದರು.
ಶಬ್ಬೀರ್ ಸಖಾಫಿ ದುಆಗೈದರು.
ಜಿಲ್ಲಾ ಉಸ್ತುವಾರಿ ಶಾಕಿರ್ ಹಾಜಿ ಮಿತ್ತೂರು ಮೇಲ್ನೋಟದಲ್ಲಿ ನಡೆದ ಸಭೆಯಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ಪ್ರ. ಕಾರ್ಯದರ್ಶಿ ಸಲೀಂ ಪಕೀರ್ಣಕಟ್ಟೆ ವರದಿ ವಾಚಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಇಬ್ರಾಹಿಂ ಮಜೂರು ಕ್ಯಾಂಪಸ್ ವರದಿ ವಾಚಿಸಿದರು. ಜಿಲ್ಲಾ ಕೋಶಾಧಿಕಾರಿ ಕೆ.ಎಸ್.ಎಂ. ಮನ್ಸೂರ್ ಲೆಕ್ಕ ಪತ್ರ ವಾಚಿಸಿದರು.
Next Story