ಆ.18: ಗೋಳ್ತಮಜಲಿನಲ್ಲಿ ಹಿಜಾಮಾ ಚಿಕಿತ್ಸೆ
ಮಂಗಳೂರು, ಆ.16: ಕಲ್ಲಡ್ಲದ ಗೋಳ್ತಮಜಲು ಹಜಾಜ್ ಸ್ಪೋಟ್ಸ್ ಕ್ಲಬ್, ಆಯುಷ್ ವಿಭಾಗ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಆ.18ರಂದು ಬೆಳಗ್ಗೆ 8ಕ್ಕೆ ಗೋಳ್ತಮಜಲಿನ ಹಜಾಜ್ ಸ್ಪೋಟ್ಸ್ ಕ್ಲಬ್ ಕಚೇರಿಯಲ್ಲಿ ಉಚಿತ ಹಿಜಾಮಾ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಹಜಾಜ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಇಂತಿಯಾಝ್ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲು ಬಂದ 120 ಮಂದಿಗೆ ಮಾತ್ರ ಈ ಶಿಬಿರದಲ್ಲಿ ಹಿಜಾಮಾ ಚಿಕಿತ್ಸೆಗೆ ಅವಕಾಶ ಲಭಿಸಲಿದೆ. ಅಧ್ಯಕ್ಷತೆಯನ್ನು ಶಾಸಕ ಯು.ರಾಜೇಶ್ ನಾಯಕ್ ವಹಿಸಲಿದ್ದು, ಮಾಜಿ ಸಚಿವ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ನಝೀರ್, ದಾವೂದ್, ಸಲೀಂ, ಜಮಾಲ್ ಉಪಸ್ಥಿತರಿದ್ದರು.
Next Story