ಬಬ್ಬುಕಟ್ಟೆ ಹಿರಾ ಸ್ಕೂಲ್ ನಲ್ಲಿ ಸ್ವಾತಂತ್ರ್ಯೋತ್ಸವ
ಬಬ್ಬುಕಟ್ಟೆ: ಇಲ್ಲಿನ ಹಿರಾ ಶಾಲೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಮುಖ್ಯ ಅತಿಥಿ ನಿವೃತ್ತ ಸೇನಾ ಅಧಿಕಾರಿ ರತ್ನಾಕರ್ ಕೋಟ್ಯಾನ್ ಧ್ವಜಾರೋಹಣಗೈದು ಶುಭ ಕೋರಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ ಎಚ್ ಮಹಮೂದ್ ಮತನಾಡಿ ನಾವಿಲ್ಲಿ ಸಂಭ್ರಮ ಪಡುವ ಪರಿಸ್ಥಿತಿಯಲ್ಲಿ ಇಲ್ಲ ಯಾಕಂದರೆ ನಮ್ಮ ನೆರೆಯ ರಾಜ್ಯ ಮತ್ತು ನೆರೆಯ ಜಿಲ್ಲೆಯು ನೆರೆ ಹಾವಳಿಯಿಂದ ತತ್ತರಿಸಿದೆ. ನಾವು ನಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ಅವರಿಗೆ ನೆರವಾಗೋಣ ಎಂದು ಹೇಳಿದರು.
ಹಿರಾ ಪ್ರಾರ್ಥಮಿಕ ಶಾಲೆಯ ಮಕ್ಕಳು ವಿವಿಧ ದೇಶಪ್ರೇಮ ಸಂದೇಶವನ್ನು ಸಾರುವ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆರಂಭದಲ್ಲಿ ಹಿರಾ ಶಾಲೆಯ ವಿದ್ಯಾರ್ಥಿನಿ ಆಯಿಶಾ ಶಮಾ ಸ್ವಾಗತಿಸಿ, ಝೋಬಿಯ ಸ್ವಾತಂತ್ರೋತ್ಸವದ ಕುರಿತು ಭಾಷಣ ಮಾಡಿದರು. ಖದೀಜಾ ನಸೀಹ ವಂದಿಸಿದರು.
ವೇದಿಕೆಯಲ್ಲಿ ಶಾಲೆಯ ಆಡಳಿತ ಸಮಿತಿಯ ಸದಸ್ಯರು, ಹಿರಾ ಪ್ರಾರ್ಥಮಿಕ ಶಾಲೆಯ ಮುಖ್ಯಸ್ಥೆ ಗುಲ್ಶನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಹಮದ್ ರಾಶಿದ್ ಕಾರ್ಯಕ್ರಮ ನಿರೂಪಿಸಿದರು.
Next Story