ಕೋಳಿ ಅಂಕಕ್ಕೆ ದಾಳಿ: 10 ಮಂದಿ ವಶಕ್ಕೆ
ಉಪ್ಪಿನಂಗಡಿ: ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು 10 ಮಂದಿಯನ್ನು ಬಂಧಿಸಿ, ಏಳು ಅಂಕದ ಕೋಳಿ ಹಾಗೂ ಜೂಜಾಟಕ್ಕೆ ಬಳಸಿದ ನಗದನ್ನು ವಶಪಡಿಸಿಕೊಂಡ ಘಟನೆ ಉರುವಾಲು ಗ್ರಾಮದ ಕಾರಿಂಜ ಬೈತಾರು ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಇಲ್ಲಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಹಣವನ್ನು ಜೂಜಿಗಿಟ್ಟು ಕೋಳಿ ಅಂಕ ನಡೆಯುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಏಳು ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಳಿ ಅಂಕದಲ್ಲಿ ನಿರತರಾಗಿದ್ದ ಗಿರಿಯಪ್ಪ ನಲಿಕೆ, ಮಹೇಶ್ ಪೂಜಾರಿ, ಪ್ರಕಾಶ್, ಪ್ರಸಾದ್, ದಿನೇಶ್, ದಿನೇಶ್ ಪೂಜಾರಿ, ದಿನೇಶ್ ಮೂಲ್ಯ, ತಿಮ್ಮಪ್ಪ ಬಂಗೇರ, ರಾಮಣ್ಣ ಹಾಗೂ ಜನಾರ್ದನ ಪೂಜಾರಿ ಎಂಬವರನ್ನು ಬಂಧಿಸಿ, ಅವರಿಂದ ಜೂಜಾಟಕ್ಕೆ ಬಳಸಿದ 4,460 ರೂ. ವಶಪಡಿಸಿಕೊಂಡಿದ್ದಾರೆ.
Next Story