ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆ: ಆ. 28ರಂದು ಕೌನ್ಸಿಲಿಂಗ್
ಉಡುಪಿ, ಆ. 24: 2018-19ನೇ ಸಾಲಿನ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಘಟಕದ ಒಳಗಿನ ಕಡ್ಡಾಯ ವರ್ಗಾವಣಾ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಶೇ.4ಕ್ಕೆ ಮಿತಿಗೊಳಿಸಿ, ಆ.28ರಂದು ಬೆಳಗ್ಗೆ 10:30ಕ್ಕೆ ಹಾಗೂ ಘಟಕದ ಒಳಗಿನ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ನ್ನು ಆ.30ರಂದು ಬೆಳಗ್ಗೆ 10:30ರಿಂದ ಮಣಿಪಾಲದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಸಂಬಂಧಪಟ್ಟ ಶಿಕ್ಷಕರು ವೇಳಾಪಟ್ಟಿ ಯಂತೆ ಕೌನ್ಸಿಲಿಂಗ್ಗೆ ಹಾಜರಾಗುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
Next Story