ಬಾವಿಗೆ ಬಿದ್ದು ಮಹಿಳೆ ಮೃತ್ಯು
ಕೋಟ, ಸೆ.4: ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬಿಲ್ಲಾಡಿ ಗ್ರಾಮದ ಜಾನುವಾರುಕಟ್ಟೆ ಎಂಬಲ್ಲಿ ಸೆ.4ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಮಂಗಳೂರು ನಿವಾಸಿ ಸವಿತಾ ಎಸ್.ಶೆಟ್ಟಿ ಎಂದು ಗುರುತಿಸಲಾಗಿದೆ.
ಇವರು ಚೌತಿ ಹಬ್ಬಕ್ಕಾಗಿ ಸೆ. 2ರಂದು ಜಾನುವಾರುಕಟ್ಟೆಯಲ್ಲಿರುವ ತನ್ನ ತಂಗಿ ಮನೆಗೆ ಬಂದಿದ್ದು, ಮನೆಯ ಎದುರಿನ ತೋಟದ ಬಳಿಯ ಆವರಣ ಇಲ್ಲದ ಬಾವಿಗೆ ಆಕಸ್ಮಿಕವಾಗಿ ಅಥವಾ ಇನ್ಯಾವುದೋ ಕಾರಣದಿಂದ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story