ಸೌತ್ ಝೋನ್ ಟೇಕ್ವಾಂಡೋ ಚಾಂಪಿಯನ್ ಶಿಪ್: ಬರಕ ಇಂಟರ್ ನ್ಯಾಶನಲ್ ಸ್ಕೂಲ್ಗೆ 2 ಚಿನ್ನ, 2 ಬೆಳ್ಳಿ ಪದಕ
ಮಂಗಳೂರು: ಇತ್ತಿಚೆಗೆ ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಪಿ. ಯು ಬಾಲಕಿಯರ ಕಾಲೇಜು ನಲ್ಲಿ ನಡೆದ ಸೌತ್ ಝೋನ್ ಟೇಕ್ವಾಂಡೋ ಓಪನ್ ಚಾಂಪಿಯನ್ ಶಿಪ್ ನಲ್ಲಿ ಫಾತಿಮಾ ಇಸ್ರತ್ 37 ಕೆ.ಜಿ. ವಿಭಾಗದ ಫೈಟಿಂಗ್ ನಲ್ಲಿ ಚಿನ್ನ ಹಾಗೂ ವೈಟ್ ಬೆಲ್ಟ್, ಪೂಂಸೆ ವಿಭಾಗದಲ್ಲಿ ಚಿನ್ನ ಮತ್ತು ಶಾಹಿದ್ ಸುಲ್ತಾನ್ 19 ಕೆ.ಜಿ. ವಿಭಾಗದ ಫೈಟಿಂಗ್ ನಲ್ಲಿ ಬೆಳ್ಳಿ ಹಾಗೂ ಕಾಲರ್ ಬೆಲ್ಟ್, ಪೂಂಸೆ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ತರಬೇತುದಾರ ಹಾಗೂ ರಾಷ್ಟ್ರದ ಮಟ್ಟದ ಟೇಕ್ವಾಂಡೋ ಪದಕ ವಿಜೇತರಾದ ಇಸಾಕ್ ನಂದವಾರ ತರಬೇತಿ ನೀಡುತ್ತಿದ್ದಾರೆ.
Next Story