ಎಸ್ಕೆಎಸ್ಸೆಸ್ಸೆಫ್ ಪರಪ್ಪು ಸೈಟ್ ಶಾಖೆ ಹಾಗೂ ಎಸ್ಕೆಎಸ್ಸೆಸ್ಸೆಫ್ ಇರಾ ಸಂಪಿಲ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ
ಕೊಣಾಜೆ:- ಇರಾ.ವಿಶ್ವ ಓಝೋನ್ ದಿನಾಚರಣೆ ಪ್ರಯುಕ್ತ ವಿಖಾಯ ಕಾರ್ಯಕರ್ತರಿಂದ ಎಸ್ಕೆಎಸ್ಸೆಸ್ಸೆಫ್ ಪರಪ್ಪು ಸೈಟ್ ಶಾಖೆ ಹಾಗೂ ಎಸ್ಕೆಎಸ್ಸೆಸ್ಸೆಫ್ ಇರಾ ಸಂಪಿಲ ವತಿಯಿಂದ ಪರಿಸರ ಸ್ವಚ್ಚತಾ ಕಾರ್ಯಕ್ರಮವು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಇರಾ ಪರಿಸರದಲ್ಲಿ ನಡೆಯಿತು.
ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷರಾದ ಬಾತೀಷ್ ಶಂಸಿ ಕೊಡ್ಲಿಪೇಟೆ ಪ್ರಾಸ್ತಾವಿಕ ಭಾಷಣ ಮಾಡಿದರು, ದ.ಕ.ಜಿ.ಪಂ ಪ್ರಥಾಮಿಕ ಶಾಲೆ ಇರಾ ಎಸ್ ಡಿಎಂಸಿ ಮಾಜಿ ಅಧ್ಯಕ್ಷರಾದ ಮುರಳಿಧರ ಭಂಡಾರಿ, ಅಬ್ದುಲ್ಲಾ ಡಿ, ಎಸ್ಕೆಎಸ್ಸೆಸ್ಸೆಫ್ ಪರಪ್ಪು ಸೈಟ್ ಶಾಖೆ ಅಧ್ಯಕ್ಷರಾದ ರಫೀಕ್ ಪರಪ್ಪು, ಪ್ರ.ಕಾರ್ಯದರ್ಶಿ ಇಕ್ಬಾಲ್ ಸೈಟ್,ಶಂಸುಲ್ ಉಲಮಾ ಕ್ರಿಯಾ ಸಮಿತಿ ಇರಾ ಅಧ್ಯಕ್ಷರಾದ ಎಸ್.ಬಶೀರ್ ಇರಾ,ವಾಮನ ಪೂಜಾರಿ,ಅಶ್ರಫ್ ಇರಾ, ಎಸ್ ಡಿಎಂಸಿ ಸದಸ್ಯ ಡಿ.ಇಬ್ರಾಯಿ, ಡಿ ಇಬ್ರಾಹಿಂ ಹಾಗೂ ರಝ್ಝಾಕ್ ಸೈಟ್ ಮುಂತಾದವರು ಉಪಸ್ಥಿತರಿದ್ದರು. ನಿಯಾಝ್ ಪರಪ್ಪು ಸ್ವಾಗತಿಸಿ ವಂದಿಸಿದರು.