ಹನಿಯಾ ಹನೀಫ್ ಕಾಪುಗೆ ‘ವಿದ್ಯಾರ್ಥಿನಿ ಪೈಲಟ್ ಪರವಾನಿಗೆ’
ಮಂಗಳೂರು, ಸೆ.18: ಕಾಪುವಿನ ಹನಿಯಾ ಹನೀಫ್ ‘ವಿದ್ಯಾರ್ಥಿನಿ ಪೈಲಟ್ ಪರವಾನಿಗೆ’ ಗಳಿಸಿದ್ದಾರೆ.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ 18ರ ಹರೆಯದ ಹನಿಯಾ ಹನೀಫ್ರಿಗೆ ಭಾರತ ಸರಕಾರದ ನಾಗರಿಕ ವಿಮಾನ ಯಾನ ಇಲಾಖೆಯು ಈ ಪರವಾನಿಗೆ ನೀಡಿದೆ. ಈಕೆ ಈ ಪರವಾನಿಗೆ ಪಡೆದ ಬ್ಯಾರಿ ಸಮುದಾಯದ ಪ್ರಥಮ ಯುವತಿ ಎಂದು ಪ್ರಕಟನೆ ತಿಳಿಸಿದೆ.
ಸದ್ಯ ಇವರು ಮೈಸೂರಿನ ಓರಿಯಂಟ್ ಫ್ಲೈಟ್ ಏವಿಯೇಶನ್ ಅಕಾಡಮಿಯಲ್ಲಿ ವಾಣಿಜ್ಯ ಪೈಲಟ್ ಪರವಾನಿಗೆ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ 2 ವರ್ಷಗಳಲ್ಲಿ ಅದು ಪೂರ್ಣಗೊಳ್ಳಲಿದೆ.
ಈಕೆ ಹನೀಫ್ ಮತ್ತು ನಝೀಯಾ ದಂಪತಿಯ ಪುತ್ರಿ ಹಾಗೂ ದಿವಂಗತ ಉಸ್ಮಾನ್ ಮತ್ತು ಅಮೀನಾ ಮತ್ತು ಅಬ್ದುಲ್ ರಹಿಮಾನ್ ಬ್ಯಾರಿ ಮತ್ತು ಜೈನಾಬ್ರ ಮೊಮ್ಮಗಳು.
Next Story