ಉಡುಪಿ:L ಅಂಚೆ ಕಚೇರಿಯಲ್ಲಿ ಆಧಾರ್ ನೊಂದಣಿ, ತಿದ್ದುಪಡಿ ಸೌಲಭ್ಯ
ಉಡುಪಿ, ಸೆ.18: ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗವು, ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಆಧಾರ ನೊಂದಣಿ ಮತ್ತು ತಿದ್ದುಪಡಿಯ ಜೊತೆಗೆ ಅಂಚೆ ಯೋಜನೆಗಳಾದ ಸುಕನ್ಯ ಸಮೃದ್ಧಿ ಯೋಜನೆ (ಎಸ್ಎಸ್ಎ), ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್), ಸಣ್ಣ ಉಳಿತಾಯ ಖಾತೆ ಯೋಜನೆಗಳು (ಎಸ್ಎಸ್ಎ), ಅಂಚೆ ಜೀವ ವಿಮೆ (ಪಿಎಲ್ಐ) ಮತ್ತು ಗ್ರಾಮೀಣ ಅಂಚೆ ಜೀವವಿಮೆ (ಆರ್ಪಿಎಲ್ಐ), ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ), ಅಂಚೆ ಸಂಗ್ರಹಣಾ ಖಾತೆ (ಪಿಡಿಎ)ಗಳನ್ನು ತೆರೆಯಲು ವಿಶೇಷ ಕೌಂಟರ್ಗಳನ್ನು ಸೆ.22 ಮತ್ತು 29, ಹಾಗೂ ಅ.6 ಮತ್ತು 13ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ತೆರೆಯಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 8277614437ನ್ನು ಸಂಪರ್ಕಿಸುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story