ಹೊರೈಝನ್ ಶಾಲೆ: ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಆಂಗ್ಲ ಮಾದ್ಯಮ ಶಾಲೆಯಲ್ಲಿ "ಸ್ಮಾರ್ಟ್ ಕ್ಲಾಸ್' ವ್ಯವಸ್ಥೆಯನ್ನು ಶಾಲಾ ವಿದ್ಯಾರ್ಥಿ ನಾಯಕ ಅಹಮದ್ ಕಬೀರ್ ಮತ್ತು ಹಝ್ರತ್ ಅಲಿಯಾ ಉದ್ಘಾಟಿಸಿದರು.
ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಮಹಮ್ಮದ್ ಅಲಿ ಫೈಝಿ ದುವಾ ನೆರವೇರಿಸಿದರು.
ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್ಯದರ್ಶಿ ಹನೀಫ್ ಎಂ.ಎ, ಮೇಲ್ವಿಚಾರಕ ವಿ.ಕೆ.ಎಂ. ಅಶ್ರಫ್, ಕೋಶಾಧಿಕಾರಿ ವಿ.ಎಚ್.ಅಶ್ರಫ್, ಸಂಚಾಲಕ ನೋಟರಿ ಅಬೂಬಕರ್, ಸದರ್ ಉಮರ್ ಸಅದಿ, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಟ್ರಸ್ಟಿಗಳಾದ ಸಿದ್ದೀಕ್ ಮಾಲಮೂಲೆ, ಅಬ್ದುಲ್ ರಹಿಮಾನ್ ,ವಿ.ಎ.ರಶೀದ್, ಅಬ್ದುಲ್ ಖಾದರ್ ಬೊಬ್ಬೆಕ್ಕೇರಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ವಿಲಾಸಿನಿ ಸ್ವಾಗತಿಸಿದರು.ಶಿಕ್ಷಕಿ ಮುನಾಝ ವಂದಿಸಿದರು.
Next Story