ಕೋಳಿ ಅಂಕ: ಓರ್ವನ ಬಂಧನ
ಕುಂದಾಪುರ, ಅ.23: ತಲ್ಲೂರು ಗ್ರಾಮದ ಪಿಂಗಾಣಿಗುಡ್ಡೆ ಎಂಬಲ್ಲಿ ಅ.22 ರಂದು ಸಂಜೆ ವೇಳೆ ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದ ಓರ್ವನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹೆಮ್ಮಾಡಿ ಗ್ರಾಮದ ಭಾಸ್ಕರ(46) ಎಂದು ಗುರುತಿಸಲಾಗಿದೆ.
ಉಳಿದ ಇಬ್ಬರು ಆರೋಪಿಗಳು ಓಡಿ ಪರಾರಿಯಾಗಿದ್ದಾರೆ. ಬಂಧಿತನಿಂದ 400ರೂ. ನಗದು, 2 ಕೋಳಿ ಹಾಗು ಎರಡು ಕೋಳಿ ಕತ್ತಿ ಮತ್ತು ಎರಡು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕುಂದಾಫುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story