ಬಡಕಬೈಲು: ಫಾಸ್ಟ್ ಫುಡ್ ಅಂಗಡಿಯಿಂದ ಕಳವು
ಬಂಟ್ವಾಳ, ಅ26: ಚೈನೀಸ್ ಫಾಸ್ಟ್ ಫುಡ್ ಅಂಗಡಿವೊಂದರಿಂದ ಸಾವಿರಾರು ರೂ. ನಗದು ಕಳವುಗೈದ ಘಟನೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ನಡೆದಿದೆ.
ಇಲ್ಲಿನ ಬಡಕಬೈಲು ನಿವಾಸಿ ಪದ್ಮನಾಭ ಎಂಬವರಿಗೆ ಸೇರಿದ ಫಾಸ್ಟ್ ಫುಡ್ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಅ.23ರಂದು ಅಂಗಡಿ ಬಂದ್ ಮಾಡಿ ಸಂಬಂಧಿಕರ ಮನೆಗೆ ತೆರಳಿದ್ದು, ಶುಕ್ರವಾರ ಸಂಜೆ ಅಂಗಡಿ ತೆರೆದು ನೋಡುವಾಗ ಪೆಟ್ಟಿಗೆಯಲ್ಲಿದ್ದ ಸುಮಾರು 7,800 ರೂ. ಕಳವು ಮಾಡಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story