ಕೆಎಸ್ಸಿಎ: ಅಂತರ್ ಪ.ಪೂ.ಕಾಲೇಜು ಕ್ರಿಕೆಟ್ : ಬ್ರಹ್ಮಾವರ ಎಸ್ಎಂಎಸ್ಗೆ 266 ರನ್ಗಳ ಜಯ
ಮಣಿಪಾಲ, ನ.20: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದಿರುವ ಅಂತರ್ ಪದವಿ ಪೂರ್ವ ಕಾಲೇಜು ಲೀಗ್ ಕಂ ನಾಕೌಟ್ ಕ್ರಿಕೆಟ್ ಪಂದ್ಯಾಟದಲ್ಲಿ ಬ್ರಹ್ಮಾವರದ ಎಸ್.ಎಂ.ಎಸ್. ಪ.ಪೂ. ಕಾಲೇಜು ತಂಡವು ಮಣಿಪಾಲದ ಮಾಧವ ಕೃಪಾ ಶಾಲೆಯ ವಿರುದ್ಧ 266 ರನ್ಳ ಅಂತರದ ಭರ್ಜರಿ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಎಸ್.ಎಂ.ಎಸ್. ತಂಡ ಸಾಗರ್ ಅವರ 94 ರನ್ಗಳ ನೆರವಿನಿಂದ 39.5 ಓವರುಗಳಲ್ಲಿ 324 ರನ್ ಗಳಿಸಿ ಆಲೌಟಾಯಿತು. ತಂಡದ ದಿವ್ಯಾಂಶು 39, ಅಭಿತ್ 31 ರನ್ ಗಳಿಸಿದರು. ಮಾಧವಕೃಪಾದ ಸೌಭಾಗ್ಯ 50 ರನ್ ನೀಡಿ 4 ಹಾಗೂ ಶ್ರೇಯಸ್ 39 ರನ್ ನೀಡಿ 3 ವಿಕೆಟ್ಗಳನ್ನು ಪಡೆದರು. ಉತ್ತರವಾಗಿ ಮಾಧವ ಕೃಪಾ ತಂಡ ಕೇವಲ 58 ರನ್ಗಳಿಗೆ ಆಲೌಟಾಗುವ ಮೂಲಕ 266 ರನ್ಗಳ ಅಂತರದ ಸೋಲನ್ನು ಕಂಡಿತು.
ಇನ್ನೊಂದು ಪಂದ್ಯದಲ್ಲಿ ಕುಂದಾಪುರದ ವೆಂಕಟರಮಣ ಕಾಲೇಜು ತಂಡ ನೀಡಿದ 90 ರನ್ಗಳ ವಿಜಯದ ಗುರಿಯನ್ನು ಉಡುಪಿಯ ಸ್ನೇಹ ಕಾಲೇಜು ತಂಡ 7 ವಿಕೆಟ್ಗಳನ್ನು ಕಳೆದುಕೊಂಡು ತಲುಪಿತು.
Next Story