ಡಿ.14-15: ತೋಡಾರಿನಲ್ಲಿ 'ಜಶ್ನೇ ರಬೀಅ್' ಕಾರ್ಯಕ್ರಮ
ಮೂಡಬಿದಿರೆ: ಶಂಸುಲ್ ಉಲಮಾ ಅರೆಬಿಕ್ ಕಾಲೇಜು ತೋಡಾರಿನಲ್ಲಿ ಡಿ.14 ರಂದು ಮಗ್ರಿಬ್ ನಮಾಝಿನ ಬಳಿಕ ತಿಂಗಳ ಮಜ್ಲಿಸುನ್ನೂರ್ ಹಾಗೂ ಡಿ.15ರಂದು ವಿಧ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯದ್ ಹುಸೈನ್ ಬಾಅಲವಿ ತಙಳ್ ಕುಕ್ಕಾಜೆ ವಹಿಸಲಿದ್ದಾರೆ. ಶೈಖುನಾ ತೋಡಾರ್ ಉಸ್ತಾದ್, ರಫೀಕ್ ಅಹ್ಮದ್ ಹುದವಿ ಕೋಲಾರ್ ಮುಖ್ಯಪ್ರಭಾಷಣ ನಡೆಸಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷರು ಡಿ.ಎ ಉಸ್ಮಾನ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story