ಶಿಮಂತೂರು: ಮಹಿಳೆಯ ಕೊಲೆ
ಮುಲ್ಕಿ, ಡಿ.15: ಮಹಿಳೆಯೊಬ್ಬರನ್ನು ಕೊಲೆಗೈದ ಘಟನೆ ಶಿಮಂತೂರಿನಲ್ಲಿ ಶನಿವಾರ ನಡೆದಿದ್ದು, ಪ್ರಕರಣ ರವಿವಾರ ಬೆಳಕಿಗೆ ಬಂದಿದೆ.
ಮೃತರನ್ನು ಶಿಮಂತೂರು ಗ್ರಾಮದ ಪರಂಕಿಲ ತೋಟ ಮನೆ ನಿವಾಸಿ ದಿ. ಶೀನ ಶೆಟ್ಟಿ ಎಂಬವರ ಪತ್ರಿ ಶಾರದ ಶೆಟ್ಟಿ(70) ಎಂದು ಗುರುತಿಸಲಾಗಿದೆ.
ಶಾರದಾರನ್ನು ಶಿಮಂತೂರು ಪರಂಕಿಲದಲ್ಲಿರುವ ಮನೆಯಲ್ಲಿ ಶನಿವಾರ ರಾತ್ರಿ ಕೊಲೆಗೈಯಲಾಗಿದೆ. ಕಳವುಗೈಯುವ ಉದ್ದೇಶದಿಂದ ಈ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕೊಲೆಗೈದ ಬಳಿಕ ಶಾರದಾ ಅವರ ಮೃತದೇಹವನ್ನು ದುಷ್ಕರ್ಮಿಗಳು ಸಮೀಪದ ಬಾವಿಗೆ ಎಸೆಯಲು ವಿಫಲ ಯತ್ನ ನಡೆಸಿರುವುದು ಕಂಡುಬಂದಿದೆ.
ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story