ಕೊಡಿಪ್ಪಾಡಿ : ಹಾಜಿ ಆದಂ ಕುಂಞಿ ನಿಧನ
ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಕೊಡಿಪ್ಪಾಡಿ ನಿವಾಸಿ ಹಾಜಿ ಆದಂ ಕುಂಞಿ (93) ರವಿವಾರ ತನ್ನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಆದಂ ಕುಂಞಿ ಅವರು ಸುಮಾರು 65 ವರ್ಷಗಳ ಹಿಂದೆ ಇಲ್ಲಿನ ಕೆ.ಜಿ. ಭಟ್ ನರ್ಸಿಂಗ್ ಹೋಂ ಬಳಿಯಲ್ಲಿ ಅಂಗಡಿಯೊಂದನ್ನು ಮಾಡಿ ಉಪ್ಪಿನಂಗಡಿಯ ಪ್ರಥಮ ವರ್ತಕ ಎಂದು ಗುರುತಿಸಿಕೊಂಡಿದ್ದರು.
ಬೀಡ, ಬೀಡಿ ಮೊದಲಾದ ಕಟ್ಲೇರಿ ವಸ್ತುಗಳ ವ್ಯಾಪಾರದಲ್ಲಿ ಮೊದಲು ತೊಡಗಿದ್ದ ಅವರು ಬಳಿಕ ಅಡಿಕೆ, ಕಾಡುತ್ಪತ್ತಿ ಖರೀದಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಆದರೆ ಇವರು ಬೀಡ "ಆದುಂಞಿಕ" ಎಂದೇ ಚಿರಪರಿಚಿತರಾಗಿದ್ದರು. ನೆಕ್ಕಿಲಾಡಿ ಉಮರುಲ್ ಫಾರೂಕ್ ಜುಮಾ ಮಸೀದಿಯ ಸ್ಥಾಪಕ ಉಪಾಧ್ಯಕ್ಷರಾಗಿ ಹಾಗೂ ಸ್ಥಳೀಯ ವಿವಿಧ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಇವರು ಗುರುತಿಸಿಕೊಂಡಿದ್ದರು.
ಮೃತರು ಪತ್ನಿ, ಪುತ್ರರು, ಪುತ್ರಿಯರು ಹಾಗು ಅಪಾರಬಂಧುಬಳಗವನ್ನು ಅಗಲಿದ್ದಾರೆ.
Next Story