ಬಾಂಬ್ ಸ್ಕ್ವಾಡ್ ಕಾರ್ಯಾಚರಣೆ : ಕೆಂಜಾರು ಗದ್ದೆಯಲ್ಲಿ ಸ್ಪೋಟಗೊಂಡ 'ಸ್ಪೋಟಕ' ವಸ್ತು
ಮಂಗಳೂರು, ಜ. 20 : ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾಗಿದ್ದ ಅನುಮಾನಾಸ್ಪದ ಬ್ಯಾಗ್ ನಲ್ಲಿದ್ದ 'ಸ್ಪೋಟಕ' ವಸ್ತುವನ್ನು ಪಕ್ಕದ ಕೆಂಜಾರ್ ನ ಗದ್ದೆಯಲ್ಲಿ ಬಾಂಬ್ ಪಡೆ ಉಸ್ತುವಾರಿಯಲ್ಲಿ ಸಂಜೆ ಸ್ಪೋಟಿಸಲಾಗಿದೆ.
ವಿಮಾನ ನಿಲ್ದಾಣದಿಂದ ಗದ್ದೆಗೆ ತೆಗೆದುಕೊಂಡು ಹೋದ ಬಾಂಬ್ ಸ್ಕ್ವಾಡ್ ಬಳಿಕ ಅಲ್ಲಿ ಅದನ್ನು ನಿಯಂತ್ರಿತ ಸ್ಫೋಟ ಮಾಡಿದ್ದಾರೆ.
ಆದರೆ ಪತ್ತೆಯಾದ ಬ್ಯಾಗ್ ನಲ್ಲಿ ಇದ್ದ ವಸ್ತು ಯಾವುದು ಎಂದು ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಸ್ಪೋಟಕದಂತಹ ವಸ್ತು ಎಂದು ಮಾತ್ರ ಪೊಲೀಸ್ ಆಯುಕ್ತರು ಹೇಳಿದ್ದಾರೆ
Next Story