ಜ.26: ಪಣಂಬೂರು ಬೀಚಿನಲ್ಲಿ ಆರೋಗ್ಯಕ್ಕಾಗಿ ಝುಂಬಾ ಡ್ಯಾನ್ಸ್
ಗಣರಾಜ್ಯೋತ್ಸವ ದಿನ ವಿಶೇಷ ಜಾಗೃತಿ ಕಾರ್ಯಕ್ರಮ
ಮಂಗಳೂರು, ಜ.23: ಗಣರಾಜ್ಯೋತ್ಸವ ದಿನದಂದು (ಜ.26) ಸಂಜೆ 4ರಿಂದ 6ರವರೆಗೆ ಪಣಂಬೂರ್ ಬೀಚಿನಲ್ಲಿ ವೀಕ್ಷಿತಾ ಅರಸ ನೇತೃತ್ವದಲ್ಲಿ ವಿಶಿಷ್ಟ ಝುಂಬಾ ಡ್ಯಾನ್ಸ್ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಝುಂಬಾ ಡ್ಯಾನ್ಸಿನ ಅಧಿಕೃತ ತರಬೇತುದಾರ ವೀಕ್ಷಿತಾ ಅರಸ ಅವರೊಂದಿಗೆ ಬೆಂಗಳೂರು ಮತ್ತು ಮಂಗಳೂರಿನ ಹಲವು ಮಂದಿ ಪ್ರತಿಭಾವಂತ ಝುಂಬಾ ತರಬೇತುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಂಗಳೂರಿಗರಲ್ಲಿ ಫಿಟ್ನೆಸ್ ಅನ್ನು ಉತ್ತೇಜಿಸುವ ಗುರಿಯೊಂದಿಗೆ ಈ ಝುಂಬಾ ಡಾನ್ಸ್ ಬೋಧಕರು ಉತ್ಸಾಹಭರಿತ ಕಾರ್ಯಕ್ರಮ ಸಾದರಪಡಿಸಲಿದ್ದಾರೆ. ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಎಪಿಡಿ ಫೌಂಡೇಶನ್ ಮತ್ತು ಎಸ್ಎಸ್ ಅರೇಂಜರ್ಸ್ ಮತ್ತು ಕ್ಯಾಟರರ್ಸ್ ಈ ಕಾರ್ಯಕ್ರಮದ ಪ್ರಾಯೋಜಕರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story