ಮನೆಯೊಳಗೆ ವ್ಯಕ್ತಿಯ ಸಂಶಯಾಸ್ಪದ ಸಾವು: ದೂರು
ಕೋಟ, ಫೆ.17: ವ್ಯಕ್ತಿಯೊಬ್ಬರು ಮನೆಯೊಳಗೆ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಫೆ.16ರಂದು ವಡ್ಡರ್ಸೆ ಗ್ರಾಮದ ಮಧುವನ ಟೆಲಿಪೋನ್ ಎಕ್ಸಚೆಂಜ್ ಎದುರು ನಡೆದಿದೆ.
ಮೃತರನ್ನು ಮಧುವನ ನಿವಾಸಿ ಮುಹಮ್ಮದ್ ಖಾಸಿಂ (58) ಎಂದು ಗುರುತಿಸಲಾಗಿದೆ. ಲೈನ್ಸೇಲ್ ಕೆಲಸ ಮಾಡಿಕೊಂಡಿದ್ದ ಇವರು, ಈ ಸಂಬಂಧ ಸಾಲಗಳನ್ನು ಮಾಡಿಕೊಂಡಿದ್ದರು. ಅಲ್ಲದೆ ಇವರು ಹೃದಯ ಸಂಬಂಧಿ ಹಾಗೂ ಬಿಪಿ ಕಾಯಿಲೆಯಿಂದ ಬಳಲುತ್ತಿದ್ದರು.
ಮನೆಯವರೆಲ್ಲ ಬೆಳಗ್ಗೆ ಶಿವಮೊಗ್ಗಕ್ಕೆ ತೆರಳಿದ್ದು, ಮನೆಯಲ್ಲಿ ಖಾಸಿಂ ಒಬ್ಬರೇ ಇದ್ದರೆನ್ನಲಾಗಿದೆ. ಸಂಜೆ ಇವರು ಮನೆಗೆ ವಾಪಾಸ್ಸು ಬಂದು ನೋಡಿದಾಗ ಖಾಸಿಂ ಮನೆಯ ಛಾವಣಿಯ ಕಬ್ಬಿಣದ ಹುಕ್ಸ್ಗೆ ನೇಣು ಬಿಗಿದು ನೇತಾಡುತ್ತಿರುವುದು ಕಂಡುಬಂದಿದ್ದು, ಹಗ್ಗವನ್ನು ಬಿಚಿದಾಗ ಖಾಸಿಂ ಮೃತಪಟ್ಟಿದ್ದರು. ಅವರ ಕುತ್ತಿಗೆಯಲ್ಲಿ ಎರಡು ಕಡೆ ಹಗ್ಗದಿಂದ ಬಿಗಿದ ಗುರುತುಗಳಿದ್ದು, ಹಗ್ಗದಲ್ಲಿ ರಕ್ತದ ಕಲೆಗಳು ಕಂಡುಬಂದಿದೆ. ಆದುದರಿಂದ ಇವರ ಮರಣದಲ್ಲಿ ಸಂಶಯವಿರುವುದಾಗಿ ಮೃತರ ಪತ್ನಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.