ಮಂಗಳೂರು: ಆಸ್ಪತ್ರೆಗೂ ವಿಸ್ತರಿಸಿದ ಟೀಂ ಬಿ- ಹ್ಯೂಮನ್ ಮತ್ತು ಎನ್ಎಂಸಿಯ ಆಹಾರ ಪೂರೈಕೆ ಸೇವೆ
ಮಂಗಳೂರು, ಮಾ.30: ಕೊರೋನ ವೈರಸ್ ಭೀತಿಯಿಂದ ಲಾಕ್ಡೌನ್ ಆದ ಪರಿಣಾಮ ನಗರದೆಲ್ಲೆಡೆ ಸಂಕಷ್ಟಕ್ಕೆ ಸಿಲುಕಿರುವವರಿಗೆ ಕಳೆದೊಂದು ವಾರದಿಂದ ಆಹಾರ ಪೂರೈಸುವಲ್ಲಿ ಸಕ್ರಿಯವಾಗಿರುವ ಮಂಗಳೂರಿನ ‘ಟೀಂ ಬಿ- ಹ್ಯೂಮನ್ ಮತ್ತು ಎನ್ಎಂಸಿ ಮೈದಾನ್ ಯುವಕರ ತಂಡ’ ಈ ಸೇವೆಯನ್ನು ಇದೀಗ ಆಸ್ಪತ್ರೆಗಳಿಗೂ ವಿಸ್ತರಿಸಿದೆ.
ಸಂಕಷ್ಟಕ್ಕೀಡಾಗಿರುವವರ ಕರೆಯೊಂದಕ್ಕೆ ಸ್ಪಂದಿಸಿರುವ ಈ ತಂಡ ರವಿವಾರದಿಂದ ಒಮೇಗಾ ಆಸ್ಪತ್ರೆಗೆ ತೆರಳಿ ಉಪಹಾರ, ಊಟವನ್ನು ವಿತರಿಸಿ ಅಲ್ಲಿರುವ ನೂರಾರು ರೋಗಿಗಳ ಮತ್ತು ಅವರ ಜೊತೆಗೆ ಇರುವವರಿಗೆ ನೆರವಾಗಿದೆ. ಹಾಗೇ ಲೇಡಿಗೋಶನ್ ಆಸ್ಪತ್ರೆಗೂ ಆಹಾರವನ್ನು ವಿತರಿಸಲಾರಂಭಿಸಿದೆ.
Next Story