ಮಂಗಳೂರು: ಹೋಲ್ಸೇಲ್ ಖರೀದಿದಾರರಿಗೆ ಮಾತ್ರ ಸೆಂಟ್ರಲ್ ಮಾರ್ಕೆಟ್ ರಾತ್ರಿ ವೇಳೆ ಓಪನ್
ಮಂಗಳೂರು : ಕೊರೋನ ವೈರಸ್ ಭೀತಿಯಿಂದ ನಗರದಲ್ಲಿ ಜನಸಂದಣಿ ನಿಯಂತ್ರಿಸುವ ಸಲುವಾಗಿ ಸೆಂಟ್ರಲ್ ಮಾರ್ಕೆಟ್ ಅನ್ನು ತಾತ್ಕಾಲಿಕವಾಗಿ ಹಗಲು ವೇಳೆ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದ್ದು, ರಾತ್ರಿ 11 ರಿಂದ ಬೆಳಗ್ಗೆ 4ರವರೆಗೆ ಸೆಂಟ್ರಲ್ ಮಾರ್ಕೆಟ್ನಲ್ಲಿರುವ ಹೋಲ್ಸೇಲ್ ಅಂಗಡಿಯವರಿಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ತಿಳಿಸಿದರು.
Next Story