ಮಂಜೇಶ್ವರ : ಗಾಂಜ ಸಹಿತ ಇಬ್ಬರು ಸೆರೆ
ಮಂಜೇಶ್ವರ : 700 ಗ್ರಾಂ ಗಾಂಜಾದೊಂದಿಗೆ ಇಬ್ಬರು ಆರೋಪಿಗಳನ್ನು ಕುಂಬಳೆ ಅಬಕಾರಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರನ್ನು ಗೇರುಕಟ್ಟೆ ಸಮೀಪದ ಬೋರ್ವೆಲ್ ಗುಡ್ಡೆ ನಿವಾಸಿ ಮುಹಮ್ಮದ್ ಹನೀಫ್ (29), ಯೂನುಸ್ (20) ಎಂದು ಗುರುತಿಸಲಾಗಿದೆ.
ಹನೀಫ್ ವಶದಲ್ಲಿದ್ದ 500 ಗ್ರಾಂ ಗಾಂಜಾ ಹಾಗೂ ಯೂನುಸ್ ವಶದಲ್ಲಿದ್ದ 200 ಗ್ರಾಂ ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕುಂಬಳೆ ಅಬಕಾರಿ ಇನ್ಸ್ಪೆಕ್ಟರ್ ನೌಫಲ್ ಅವರಿಗೆ ಸಿಕ್ಕಿದ ರಹಸ್ಯ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ.
Next Story