ಕೋಳಿಅಂಕ: ನಾಲ್ವರ ಬಂಧನ
ಅಮಾಸೆಬೈಲು, ಎ.6: ಮಚ್ಚಟ್ಟು ಗ್ರಾಮದ ಕೊರ್ತುಗುಂಡಿ ಎಂಬಲ್ಲಿ ಎ.5 ರಂದು ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಕೊರ್ತುಗುಂಡಿಯ ಕರುಣಾಕರ ಶೆಟ್ಟಿ(31), ಹಂಚಿಕಟ್ಟೆಯ ವಿಠಲ ಶೆಟ್ಟಿ (55), ಸುರೇಶ ಶೆಟ್ಟಿ(30), ಹಾರ್ಕಳದ ಶಶಿಧರ ಪೂಜಾರಿ(38) ಎಂಬವರ ಬಂಧಿತ ಆರೋಪಿಗಳು. ಇವರಿಂದ 5 ಹುಂಜ ಕೋಳಿಗಳನ್ನು ಹಾಗೂ 860 ರೂ. ನಗದು, ಎರಡು ಬಾಳುಕತ್ತಿಯನ್ನು ವಶಪಡಿಸಿ ಕೊಳ್ಳಲಾಗಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story