ಫಳ್ನೀರ್ ಯೂತ್ ಅಸೋಸಿಯೇಶನ್ನಿಂದ ಪ್ರಧಾನಿ ಫಂಡ್ಗೆ ಆರ್ಥಿಕ ನೆರವು
ಕೊರೋನ ಸೋಂಕು ವಿರುದ್ಧ ಹೋರಾಟ
ಮಂಗಳೂರು : ಕೊರೋನ ಸೋಂಕಿನಿಂದ ಭಾರತ ನಲುಗಿಹೋಗಿದ್ದು, ಇದರ ವಿರುದ್ಧ ಹೋರಾಟ ನಡೆಸಲು ಪ್ರಧಾನ ಮಂತ್ರಿ ಫಂಡ್ಗೆ ಫಳ್ನೀರ್ ಯೂತ್ ಅಸೋಸಿಯೇಶನ್ನಿಂದ 25,000 ರೂ. ಹಸ್ತಾಂತರಿಸಲಾಗಿದೆ.
"ದೇಶದಲ್ಲಿ ಕೊರೋನ ವೈರಸ್ ಹಾವಳಿ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಜಾರಿಗೊಳಿಸಿದ ಲಾಕ್ಡೌನ್ ಸ್ವಾಗತಾರ್ಹ" ಎಂದು ಫಳ್ನೀರ್ ಯೂತ್ ಅಸೋಸಿಯೇಶನ್ನ ತೌಫೀಖ್ ಫಳ್ನೀರ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರಾಜ್ಯಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಆದರೆ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡದಿರುವುದು ಬೇಸರ ತಂದಿದೆ. ಇನ್ನು ಮುಂದೆಯಾದರೂ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುತ್ತಾರೆನ್ನುವ ಭರವಸೆ ನಮ್ಮ ಅಸೋಸಿಯೇಶನ್ಗೆ ಇದೆ ಎಂದು ತೌಫೀಖ್ ಫಳ್ನೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story