ಹರೇಕಳ: ಎಸ್ಡಿಪಿಐ-, ಪಿಎಫ್ಐ ವತಿಯಿಂದ ಕಿಟ್ ವಿತರಣೆ
ಮಂಗಳೂರು, ಮೇ 9: ಎಸ್ಡಿಪಿಐ ಹರೇಕಳ ಗ್ರಾಮ ಸಮಿತಿ ಮತ್ತು ಪಿಎಫ್ಐ ಹರೇಕಳ ಘಟಕದ ಜಂಟಿ ಆಶ್ರಯದಲ್ಲಿ ಕೊರೋನ ಲಾಕ್ಡೌನ್ ಕಾರಣದಿಂದ ಕಂಗಾಲಾಗಿರುವ ಹರೇಕಳ ಗ್ರಾಮ ವ್ಯಾಪ್ತಿಯ ನ್ಯೂಪಡ್ಪು, ಬೈತಾರ್, ದೇರಿಕಟ್ಟೆ, ಐಕು, ದೆಬ್ಬೇಲಿ, ವಡ್ಡೇದಗುರಿ, ಮಲಾರ್ ಕೋಡಿ, ಗ್ರಾಮಚಾವಡಿ ವ್ಯಾಪ್ತಿಯ ಸುಮಾರು 500 ಕುಟುಂಬಗಳಿಗೆ ಜಾತಿ-ಮತ, ಭೇದ ಭಾವವಿಲ್ಲದೆ ಸ್ವಾಭಿಮಾನದ ಸಾಂತ್ವನ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಎಸ್ಡಿಪಿಐ ನಾಯಕ ಅಬ್ದುಲ್ ಬಶೀರ್ ಎಸ್ಎಂ ಮತ್ತು ಪಿಎಫ್ಐ ನಾಯಕ ಇಮ್ತಿಯಾಝ್ ಬಿ. ಮತ್ತಿತರರಿದ್ದರು.
Next Story