ಫರಂಗಿಪೇಟೆ: ವಿದ್ಯುತ್ ತಗಲಿ ಓರ್ವ ಮೃತ್ಯು, ಮತ್ತೋರ್ವರಿಗೆ ಗಾಯ
ಫರಂಗಿಪೇಟೆ, ಮೇ 30: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗಲಿ ಯುವಕನೋರ್ವ ಮೃತಪಟ್ಟು, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಪೇರಿಮಾರ್ ಎಂಬಲ್ಲಿ ಇಂದು ಸಂಜೆಯ ವೇಳೆಗೆ ಸಂಭವಿಸಿದೆ.
ಘಟನೆಯಿಂದ ಮುಬಾರಕ್ (23) ಎಂಬವರು ಮೃತಪಟ್ಟಿದ್ದು, ಫಾರೂಕ್(25) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಬ್ಬರೂ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ನಿವಾಸಿಗಳಾಗಿದ್ದಾರೆ.
ಪೇರಿಮಾರ್ ಜಲಾಲಿಯ ನಗರದ ಮೌಲಾ ಮಸೀದಿಯ ಮಹಡಿಯ ಮೇಲೆ ತಗಡು ಶೀಟು ಅಳವಡಿಸುವ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಆಕಸ್ಮಿಕವಾಗಿ ತಗಲಿದೆ ಎನ್ನಲಾಗಿದೆ. ವಿದ್ಯುತ್ ಪ್ರವಹದಿಂದ ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ಕೂಡಲೇ ಅಸ್ಪತ್ರೆಗೆ ಸಾಗಿಸಲಾಗಿ ತ್ತಾದರೂ ಮುಬಾರಕ್ ದಾರಿ ಮಧ್ಯೆ ಕೊನೆ ಉಸಿರೆಲೆದಿದ್ದಾರೆ.
ಬೆಳಗ್ಗೆಯಿಂದ ತಗಡು ಶೀಟ್ ಅಳವಡಿಸುವ ಕೆಲಸದಲ್ಲಿ ತೊಡಗಿದ್ದ ಯುವಕರು ಕೊನೆಯ ಒಂದು ಶೀಟ್ ಮಾತ್ರ ಅಳವಡಿಸಲು ಬಾಕಿ ಇತ್ತು. ಕೊನೆಯ ಶೀಟ್ ಅಳಡಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.