ಉಡುಪಿ ಜಿಲ್ಲೆಯಲ್ಲಿ 27.33 ಮಿ.ಮೀ. ಮಳೆ
ಉಡುಪಿ, ಜೂ.6: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 27.33 ಮಿ.ಮೀ.. ಮಳೆಯಾಗಿದೆ. ಉಡುಪಿಯಲ್ಲಿ 33ಮಿ.ಮೀ, ಕುಂದಾಪುರದಲ್ಲಿ 38 ಹಾಗೂ ಕಾರ್ಕಳದಲ್ಲಿ 11ಮಿ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ.
ಭಾರೀ ಗಾಳಿಮಳೆಯಿಂದ ನಿನ್ನೆ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ರಾಜು ದೇವಾಡಿಗ ಎಂಬವರ ದನದ ಕೊಟ್ಟಿಗೆಗೆ ಭಾಗಶ: ಹಾನಿಯಾಗಿದ್ದು 25ಸಾವಿರ ರೂ.ನಷ್ಟವಾಗಿದೆ. ಅದೇ ರೀತಿ ಗಿಳಿಯಾರು ಗ್ರಾಮದ ಮಾಧವ ಆಚಾರ್ ಎಂಬವರ ಪಕ್ಕಾ ಮನೆಯೂ ಭಾಗಶ: ಹಾನಿಯಾಗಿ 25ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
Next Story