ಎಸ್ಐ, ಸಿಎಪಿಎಫ್ 2020 ಹುದ್ದೆಗಳಿಗೆ ಅರ್ಜಿ ಆಹ್ವಾನ
ಉಡುಪಿ, ಜು.1: ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ಸಬ್ಇನ್ಸ್ಪೆಕ್ಟರ್(ಎಸ್ಐ) ಹಾಗೂ ಕೇಂದ್ರ ಮೀಸಲು ಪೋಲಿಸ್ ಪಡೆ (ಸಿಎಪಿಎಫ್)ಯ 2020 ಹುದ್ದೆಗಳಿಗೆ ಕಂಪ್ಯೂಟರ್ ಆನ್ಲೈನ್ ಸ್ಫರ್ಧಾತ್ಮಕ ಪರೀಕ್ಷಾ ನೇುಕಾತಿಗಾಗಿ ಆನ್-ಲೈನ್ ಅರ್ಜಿ ಕರೆದಿದೆ.
ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅಂದರೆ ಸಾಮಾನ್ಯ ಪದವಿ ಶಿಕ್ಷಣ ಅಥವಾ ತತ್ಸಮಾನ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಮೂಲಕ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್- http://ssc.nic.in- ಪೋರ್ಟಲ್ನಲ್ಲಿ ಸಲ್ಲಿಸಬಹುದಾಗಿದೆ. ಆನ್ಲೈನ್ ನೊಂದಣಿಯು ಜೂನ್ 17ರಿಂದ ಪ್ರಾರಂಭಗೊಂಡಿದ್ದು, ಜುಲೆ 16ಕ್ಕೆ ಕೊನೆಯ ದಿನವಾಗಿರುತ್ತದೆ.
ಅರ್ಜಿ ಸಲ್ಲಿಸುವ ಮೊದಲು ಜಾಹೀರಾತನ್ನು ಸಂಪೂರ್ಣವಾಗಿ ಓದಿ ಕೊಳ್ಳಬೇಕು. ಅರ್ಜಿ ಸಲ್ಲಿಸಲು ಅಗತ್ಯವಾದ ಮಾರ್ಗದರ್ಶನವನ್ನು ವೆಬ್ಸೈಟ್ ನಿಂದ ಪಡೆಯಬೇಕು. ಬೇಕಿದ್ದರೆ ಸಹಾಯವಾಣಿ 080-25502520, 9483862020 ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗಾಧಿಕಾರಿ ಕಚೇರಿಯನ್ನು ಹಾಗೂ ದೂ.ಸಂಖ್ಯೆ 08202574869/9480259790 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.