ಉಳ್ಳಾಲ : ರವಿವಾರ ಎಂಟು ಮಂದಿಗೆ ಕೊರೋನ ಪಾಸಿಟಿವ್
ಉಳ್ಳಾಲ,ಜು.12: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ರವಿವಾರ ಎಂಟು ಮಂದಿಗೆ ಕೊರೋನ ದೃಢಪಟ್ಟಿದೆ. ಉಳ್ಳಾಲ ನಗರದಲ್ಲಿ ಕಳೆದೆರಡು ದಿನಗಳಿಂದ ಕೇವಲ ಮೂರು, ನಾಲ್ಕು ಪ್ರಕರಣ ಗಳು ಮಾತ್ರ ದಾಖಲಾಗುದ್ದವು. ರವಿವಾರ ಓರ್ವ ಯುವತಿ ಸೇರಿ ಎಂಟು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ
ಬಸ್ತಿಪಡ್ಪುವಿನಲ್ಲಿ 49 ವರ್ಷದ ಯುವಕ, ಕಾಪಿಕಾಡ್ ಹೋಟೆಲ್ ಬಳಿ 30,27,36,50ವರ್ಷದ ಪುರುಷ, ಉಳ್ಳಾಲದಲ್ಲಿ42, 55ವರ್ಷದ ಪುರುಷ, ತೊಕ್ಕೊಟ್ಟುವಿನಲ್ಲಿ 23 ವರ್ಷದ ಯುವತಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಕೋಟೆಕಾರಿನಲ್ಲಿ ಐದು ಪ್ರಕರಣ
ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರವಿವಾರ ಐದು ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕೊರೋನ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನರು ಜಾಗೃತಿ ಮೂಡಿಸುವ ಸಲುವಾಗಿ ಸ್ವಯಂ ಪ್ರೇರಿತ ಬಂದ್ ಕೆಲವು ಕಡೆ ನಡೆಯುತ್ತಿದೆ.
ಕೋಟೆ ಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ 29, 38ವರ್ಷದ ಪುರುಷ, ಪನೀರ್ ನಲ್ಲಿ 46 ವರ್ಷದ ಮಹಿಳೆ, ದೇರಳಕಟ್ಟೆ 65 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಕಿನ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 29 ವರ್ಷದ ಮಹಿಳೆ, ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ 40 ವರ್ಷದ ಪುರುಷ, ತಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸಿರೋಡ್ ನಲ್ಲಿ 19 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಜೂ.23 ರಿಂದ ಈವರೆಗೆ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು ಸೋಂಕಿತರ ಸಂಕ್ಯೆ 251 ಕ್ಕೇರಿದೆ.