ಮಂಗಳೂರು: ರಮ್ಯಾರಿಗೆ ಪಿಎಚ್ಡಿ ಪದವಿ
ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದ ರಮ್ಯಾ ಎಚ್.ಡಿ. ಅವರು ‘ದಿ ವರ್ಕಿಂಗ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಶನ್ ಸಿಸ್ಟಂ: ಎ ಸ್ಟಡಿ ಆನ್ ವೆಲ್ಫೇರ್ ಆ್ಯಂಡ್ ಫುಡ್ ಸೆಕ್ಯುರಿಟಿ ಇಫೆಕ್ಟ್ ಆನ್ ಬಿಪಿಎಲ್ ಫ್ಯಾಮಿಲೀಸ್ ಇನ್ ಇಂಡಿಯಾ’ ವಿಷಯದಲ್ಲಿ ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್ಡಿ ಪದವಿ ಪ್ರದಾನ ಮಾಡಿದೆ.
ಪ್ರಾಧ್ಯಾಪಕ ಪ್ರೊ.ಅರಬಿ ಯು. ಮಾರ್ಗದರ್ಶನ ನೀಡಿದ್ದರು. ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕ, ಸುಳ್ಯದ ದೊಡ್ಡತೋಟ ಬಳಿಯ ಡಾ.ಸುಬ್ರಹ್ಮಣ್ಯ ಕಿಲಾರ್ಕಜೆಯ ಪತ್ನಿಯಾಗಿರುವ ರಮ್ಯಾ ಅವರು ಸುಳ್ಯ ಬಡ್ಡಡ್ಕ ಹೊನ್ನೇಡಿ ದೇವಪ್ಪ ನಾಯ್ಕ-ರೇವತಿ ದಂಪತಿಯ ಪುತ್ರಿ.
Next Story