ಕೋಟ: ಹೊಳೆಗೆ ಬಿದ್ದು ವೃದ್ದೆ ಮೃತ್ಯು
ಕೋಟ, ಜು.24: ವೃದ್ದೆ ಯೊಬ್ಬರು ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಕಲುಕಟ್ಟು ಸಮೀಪದ ಕಲ್ಲುಗುಂಡಿ ಎಂಬಲ್ಲಿ ನಡೆದಿದೆ. ಮೃತರನ್ನು ಅಚ್ಲಾಡಿ ಗ್ರಾಮದ ಸೂರಿಬೆಟ್ಟು ನಿವಾಸಿ ಸಿದ್ದಮ್ಮ ಶೆಡ್ತಿ ಎಂದು ಗುರುತಿಸಲಾಗಿದೆ.
ಇವರು ಜು.22ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದು, ಇವರ ಮೃತದೇಹ ಜು.24ರಂದು ಬೆಳಗ್ಗೆ ಕಲ್ಲುಗುಂಡಿಯ ಹೊಳೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story