ಮೂಡುಬಿದಿರೆ: ಮನೆಯಲ್ಲಿ ದನದ ಮಾಂಸ ಪತ್ತೆ, ಇಬ್ಬರ ಬಂಧನ
ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲು ಎಂಬಲ್ಲಿ ಅಕ್ರಮವಾಗಿ ದನದ ಮಾಂಸಗಳ ದಾಸ್ತಾನು ಇರಿಸಿರುವ ಅಡ್ಡೆಗೆ ಬುಧವಾರ ದಾಳಿ ನಡೆಸಿದ ಮೂಡುಬಿದಿರೆ ಪೊಲೀಸರು ಮಾಂಸವನ್ನು ವಶಕ್ಕೆ ಪಡೆದುಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುಹಮ್ಮದ್ ಬಾವ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ 15 ಕೆ.ಜಿ ದನದ ಮಾಂಸ ಪತ್ತೆಯಾಗಿದ್ದು, ಮುಹಮ್ಮದ್ ಬಾವ ಹಾಗೂ ಇನ್ನೋರ್ವ ಆರೋಪಿ ಮಹಮ್ಮದ್ ರಫೀಕ್ ಎಂಬಾತನನ್ನು ಪೊಲೀಸರು ಬಂಧಿಸಿದರು.
Next Story