ಎಸೆಸೆಲ್ಸಿ ಫಲಿತಾಂಶ : ಉದ್ಯಾವರ ಎಂಇಟಿ ಸ್ಕೂಲ್ನಲ್ಲಿ ಶೇ.100 ಫಲಿತಾಂಶ
ಅಮೀನಾ ಶಿಮಾಝ್
ಉಡುಪಿ, ಆ.10: ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ದಾಖಲಿಸಿದೆ.
ಪರೀಕ್ಷೆ ಬರೆದ ಒಟ್ಟು 18 ವಿದ್ಯಾರ್ಥಿಗಳ ಪೈಕಿ ಶೇ.22ರಷ್ಟು ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಯಲ್ಲಿ, ಶೇ.61ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಶೇ.17ರಷ್ಟು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲಾ ವಿದ್ಯಾರ್ಥಿನಿ ಅಮೀನಾ ಶಿಮಾಝ್ 588(ಶೇ.94.08) ಅಂಕವನ್ನು ಗಳಿಸಿದ್ದಾರೆ.
ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿ ಗಳಿಗೆ ಶಾಲಾ ಚೇಯರ್ಮೆನ್ ಅಬ್ದುಲ್ ಜಲೀಲ್ ಹಾಗೂ ಅಕಾಡೆಮಿಕ್ ಹೆಡ್ ಜುನೈದಾ ಸುಲ್ತಾನ್ ಅಭಿನಂದನೆ ಸಲ್ಲಿಸಿದ್ದಾರೆ.
Next Story