ಕೊರೋನ: ಪುತ್ತೂರು, ಕಡಬದಲ್ಲಿ 800 ದಾಟಿದ ಪಾಸಿಟವ್ ಪ್ರಕರಣಗಳ ಸಂಖ್ಯೆ
ಪುತ್ತೂರು, ಸೆ.3: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಗುರುವಾರ ಮತ್ತೆ 17 ಕೊರೋನ ಪಾಸಿಟವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಉಭಯ ತಾಲೂಕುಗಳಲ್ಲಿ ದೃಢಪಟ್ಟ ಕೋವಿಡ್ ಪ್ರಕರಣಗಳ ಸಂಖ್ಯೆ 807ಕ್ಕೆ ಏರಿಕೆಯಾಗಿದೆ.
ಪುತ್ತೂರು ತಾಲೂಕಿನ ನಗರಸಭಾ ವ್ಯಾಪ್ತಿಯ ಹಾರಾಡಿ ನಿವಾಸಿ 73 ವರ್ಷದ ಮಹಿಳೆ, ಪಡ್ನೂರು ನಿವಾಸಿಗಳಾದ 32 ವರ್ಷದ ಪುರುಷ ಮತ್ತು 17 ವರ್ಷದ ಯುವಕ, ಕಸ್ಬಾ ನಿವಾಸಿ 48 ವರ್ಷದ ಮಹಿಳೆ, ಚಿಕ್ಕ ಪುತ್ತೂರು ನಿವಾಸಿ 29 ವರ್ಷದ ಯುವತಿ, ಮುಕ್ವೆ ನಿವಾಸಿ 58 ವರ್ಷದ ಪುರುಷ, ಗ್ರಾಮಾಂತರ ಪ್ರದೇಶವಾದ ಕಬಕ ನಿವಾಸಿ 23 ವರ್ಷದ ಯುವಕ, ನರಿಮೊಗರು ನಿವಾಸಿ 28 ವರ್ಷದ ಯುವಕ, ಕುರಿಯ ನಿವಾಸಿಗಳಾದ 66, 10 ವರ್ಷದ ಬಾಲಕಿಯಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.
ಕಡಬ ತಾಲೂಕಿನ ತೋಳ್ಪಾಡಿ ನಿವಾಸಿ 30 ವರ್ಷದ ಪುರುಷ, ಶಿರಾಡಿ ಸಿರಿಬಾಗಿಲು ನಿವಾಸಿಗಳಾದ 60 ವರ್ಷದ ಮಹಿಳೆ, 48 ವರ್ಷದ ಪುರುಷ, 70 ವರ್ಷದ ವೃದ್ಧ, ಐತ್ತೂರು ಬೆತ್ತೋಡಿ ನಿವಾಸಿ 31 ವರ್ಷದ ಪುರುಷ, ಕೊಯ್ಲ ನಿವಾಸಿ 37 ವರ್ಷದ ಪುರುಷ, ಆಲಂಕಾರು ನಿವಾಸಿ 52 ವರ್ಷದ ಪುರುಷರೊಬ್ಬರಲ್ಲಿ ಕೊರೋನ ಪಾಸಿಟಿವ್ ವರದಿಯಾಗಿದೆ