ಮುಂಬೈ ಯುವಕ ಹೂಡೆಯಲ್ಲಿ ಆತ್ಮಹತ್ಯೆ
ಮಲ್ಪೆ, ಸೆ. 25: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮುಂಬೈಯ ಯುವಕ ನೋರ್ವ ಪಡುತೋನ್ಸೆಯ ಹೂಡೆ ಎಂಬಲ್ಲಿರುವ ತನ್ನ ಸ್ನೇಹಿತ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಸುಕಿನ ವೇಳೆ ನಡೆದಿದೆ.
ಮೃತರನ್ನು ಮುಂಬೈ ನಿವಾಸಿ ಜೆಸಿಂತಾ ಡಿಕ್ರೂಸ್ ಎಂಬವರ ಮಗ ನಿಯೆಲ್ ಡಿಕ್ರೂಸ್(18) ಎಂದು ಗುರುತಿಸಲಾಗಿದೆ. ಮುಂಬೈಯ ಜೋಶಿ ಕಾಲೇಜಿನ ವಿದ್ಯಾರ್ಥಿಯಾಗಿರುವ ನಿಯೆಲ್, ಮಾನಸಿಕ ಖಿನ್ನತೆಯ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಸೆ.14ರಂದು ತನ್ನ ಸಹಪಾಠಿ ವಾಲ್ಟರ್ ಡಿಸೋಜನೊಂದಿಗೆ ಹೂಡೆಯಲ್ಲಿರುವ ಅವರ ಮನೆಗೆ ಬಂದಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡ ನಿಯೆಲ್ ಮನೆಯ ಎದುರಿನ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story