ಕಂಡ್ಲೂರು ಮಸೀದಿ ಅಧ್ಯಕ್ಷರಾಗಿ ಎಸ್.ದಸ್ತಗೀರ್ ಆಯ್ಕೆ
ಕುಂದಾಪುರ, ಸೆ.26: ಕಂಡ್ಲೂರು ಜುಮಾ ಮಸೀದಿಯ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಎಸ್.ದಸ್ತಗೀರ್ ಆಯ್ಕೆಯಾಗಿದ್ದಾರೆ.
ಸೆ.20ರಂದು ಮಸೀದಿಯ ಮಹಾಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕಾಸಿಮ್ ಶಬ್ಬರ್, ಕಾರ್ಯದರ್ಶಿ ಯಾಗಿ ಖಾಜಿ ಮುಹ್ಯುದ್ದೀನ್, ಜೊತೆಕಾರ್ಯದರ್ಶಿಯಾಗಿ ಎಸ್.ಉಸ್ಮಾನ್ ಸಾಹೇಬ್, ಖಜಾಂಚಿಯಾಗಿ ಕಾಸಿಮ್ ಅಬಿದೀನ್ ಸಾಹೆಬ್, ಸದಸ್ಯರು ಗಳಾಗಿ ಶಿಹಾಬುದ್ದೀನ್, ಶಾಹಿದ್, ಬಿ.ರಿಯಾಝ್, ಮುಖ್ತಾರ್ ಅಹ್ಮದ್ ಬಿ., ಝಮೀರ್ ಅಹ್ಮದ್ ಶೇಖ್, ನೂರುಲ್ಲಾಹ್ ಸಾಹೇಬ್ ಅವರನ್ನು ಆಯ್ಕೆ ಮಾಡಲಾಯಿತು.
Next Story