ಎರಡು ದಿನಗಳ ಗೃಹ ಉತ್ಪನ್ನಗಳ ತರಬೇತಿ
ಮಣಿಪಾಲ, ಸೆ.30: ಎರಡು ದಿನಗಳ ಗೃಹ ಉತ್ಪನ್ನಗಳ ತರಬೇತಿ ಕಾರ್ಯಕ್ರಮ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಸೆಲ್ಕೋ ಫೌಂಡೇಶನ್ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಶಿವಳ್ಳಿಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟ್ನಲ್ಲಿ ಜರಗಿತು.
20 ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಿದ್ದರು.ಸಾರು, ಸಾಂಬಾರು ಮತ್ತು ಕಷಾಯ ಹುಡಿಗಳು, ಪುಳಿಯೋಗರೆ ಮಿಕ್ಸ್, ಜ್ಯಾಮ್, ಸೆವೆನ್ ಕಫ್ ಸ್ವೀಟ್, ಫಿನಾಯಿಲ್, ಸೋಪು, ವಿವಿಧ ರೀತಿಯ ಮ್ಯಾಟ್ ತಯಾರಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ಕಲಿಸಲಾಯಿತು.
ಮಹಿಳೆಯರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ತರಬೇತಿಯ ಸದುಪಯೋಗವನ್ನು ಪಡಕೊಂಡರು. ಅವರು ಕಲಿತ ವಸ್ತುಗಳನ್ನು ವೈಯಕ್ತಿಕವಾಗಿ ಅಥವಾ ಗುಂಪಿನಲ್ಲಿ ತಯಾರಿಸಿ ಪ್ರಾಯೋಗಿಕವಾಗಿಯೂ ಕಲಿತರು. ಇವುಗಳಿಂದ ಆದಾಯ ಪಡೆಯುವ ವಿಧಾನ ವನ್ನೂ ಅವರಿಗೆ ತಿಳಿಸಲಾಯಿತು.
ಗೀತಾ ಮತ್ತು ಲಕ್ಷ್ಮೀಬಾಯಿ ಅವರು ಸಂಪನ್ನೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು
Next Story