ಕೆನರಾ ಬಸ್ಸು ಮಾಲಕರ ಸಂಘದಿಂದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್
ಮಂಗಳೂರು, ಆ.5: ದ.ಕ. ಮತ್ತು ಉಡುಪಿ ಜಿಲ್ಲಾ ಕೆನರಾ ಬಸ್ಸು ಮಾಲಕರ ಸಂಘದಿಂದ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಶೇ.50ರ ರಿಯಾಯಿತಿ ದರದ ಬಸ್ಪಾಸ್ಗಳನ್ನು ವಿತರಿಸಲಾಗುತ್ತದೆ. ಆ. 31ರ ಒಳಗೆ ಎಲ್ಲಾ ಫಲಾನುಭವಿ ವಿದ್ಯಾರ್ಥಿಗಳು ಬಸ್ಪಾಸ್ನ್ನು ಪಡೆದುಕೊಳ್ಳಬೇಕು ಎಂದು ಕೆನರಾ ಬಸ್ಸು ಮಾಲಕರ ಸಂಘದ ಪ್ರಕಟನೆ ತಿಳಿಸಿದೆ.
ಅರ್ಜಿ ಹಾಗೂ ಪಾಸ್ಗಳು ದೊರೆಯುವ ಸ್ಥಳ
1. ಪಾಸ್ ಕೌಂಟರ್ - ಸರ್ವಿಸ್ ಬಸ್ಸ್ಟ್ಯಾಂಡ್, ಮಂಗಳೂರು 0824-2448743
2. ಪೂಜಾಶ್ರೀ ಕಾಂಪ್ಲೆಕ್ಸ್ - ಟೆಲಿಪೋನ್ ಎಕ್ಸ್ಚೇಂಜ್ ಹತ್ತಿರ, ಉಡುಪಿ 0820-2521211
3. ದುರ್ಗಾಂಬಾ ಮೋಟಾರ್ಸ್, ಹೊಸ ಬಸ್ಸ್ಸ್ಟ್ಯಾಂಡ್ ಆಫೀಸ್, ಕುಂದಾಪುರ 9740000133
4. ನಿಶ್ಮಿತಾ ಮೋಟಾರ್ಸ್ ಆಫೀಸ್, ಮೂಡಬಿದ್ರೆ -08258-236395
5. ಸಿ.ಸಿ.ಟಿ ಆಫೀಸ್, ದ್ವಾರಕಾ ಬಿಲ್ಡಿಂಗ್ ಎ.ಎಸ್.ರೋಡ್, ಕಾರ್ಕಳ 08258-232233
6. ಕೆ.ಸಿ.ಟಿ. ಆಫೀಸ್ ಬಸ್ಸ್ಸ್ಟ್ಯಾಂಡ್, ಕಿನ್ನಿಗೋಳಿ - 0824-2295918
7. ಸಿ.ಸಿ.ಟಿ. ಆಫೀಸ್ ಬಸ್ಸ್ಸ್ಟ್ಯಾಂಡ್ ಮೂಡಬಿದ್ರೆ -08258-239155
ವಿದ್ಯಾರ್ಥಿಗಳು ತಮ್ಮ ಅಥವಾ ಪೋಷಕರ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸಬೇಕು. ಬಸ್ಪಾಸ್ ಆದ ಕೂಡಲೇ ಮೊಬೈಲ್ಗೆ ಸಂದೇಶ ಕಳುಹಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.