ಶಂಸುಲ್ ಹುದಾ ವಿದ್ಯಾರ್ಥಿ ಸಂಘ ರಚನೆ
ಕೊಣಾಜೆ, ಆ.30: ಬೋಳಿಯಾರ್ ಮದ್ರಸದ ಶಂಸುಲ್ ಹುದಾ ವಿದ್ಯಾರ್ಥಿ ಸಂಘದ ರಚನಾ ಸಭೆ ಇತ್ತೀಚೆಗೆ ಜರಗಿತು.ಮಸೀದಿಯ ಖತೀಬ್ ಎನ್.ಅಬ್ದುರ್ರಹ್ಮಾನ್ ಫೈಝಿ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಮುಖ್ಯ ಶಿಕ್ಷಕ ವಿ.ಟಿ.ಅಬ್ದುಸ್ಸಲಾಂ ಚಿಶ್ತಿ ದುಆ ನೆರವೇರಿಸಿದರು. ಶಿಕ್ಷಕರಾದ ಬಿ.ಎಂ.ಅಲಿ ಮೌಲವಿ ಕಡ್ತಮುಗೇರು, ಎಂ.ಪಿ.ಉಮರ್ ಮುಸ್ಲಿಯಾರ್ ರಾಧುಕಟ್ಟೆ ಹಾಗೂ ಕೆ.ಮುಹಮ್ಮದ್ ಮಸ್ಲಿಯಾರ್ ಕರಾಯ ಮಾತನಾಡಿದರು. 2016-17ನೆ ಸಾಲಿನ ಗೌರವಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಫೈಝಿ, ಅಧ್ಯಕ್ಷರಾಗಿ ಅಹ್ಮದ್ ಬಶೀರ್, ಪ್ರಧಾನ ಕಾರ್ಯದರ್ಶಿಯಾಗಿ ಜೌಹರ್ ಅಲಿ, ಕಾರ್ಯದರ್ಶಿಗಳಾಗಿ ಕಬೀರ್, ಲುಕ್ಮಾನ್, ಕೋಶಾ ಧಿಕಾರಿಯಾಗಿ ಸಫ್ವಾನ್, ಸಂಘಟನಾ ಕಾರ್ಯ ದರ್ಶಿಯಾಗಿ ಅಸ್ವದ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಮೀಮ್, ಶಂಸುದ್ದೀನ್, ನಝೀರ್, ನೌಷಾದ್ ಆಯ್ಕೆಯಾದರು. ಮದ್ರಸ ವಿದ್ಯಾರ್ಥಿ ಅಹ್ಮದ್ ಬಶೀರ್ ಸ್ವಾಗತಿಸಿದರು. ಜೌಹರ್ ಅಲಿ ವಂದಿಸಿದರು.
Next Story