ಚೀನಾ ಫೆಸ್ಟಿವಲ್ಗೆ ಐವನ್
ಮಂಗಳೂರು, ಆ.31: ಚೀನಾದಲ್ಲಿ ಸೆ.4ರಿಂದ 7ರವರೆಗೆ ನಡೆಯ ಲಿರುವ ‘ಜಿನಾನ್ ಸ್ಪಿರಿಂಗ್ ಫೆಸ್ಟಿವಲ್-2016’ರಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಆಯ್ಕೆಯಾಗಿದ್ದಾರೆ.
ಚೀನಾದ ಜಿನಾನ್ ಮುನ್ಸಿಪಲ್ ಪೀಪಲ್ಸ್ ಗೌವರ್ನಮೆಂಟ್ನ ಆಹ್ವಾನದ ಮೇರೆಗೆ ಇಂಡೋ-ಚೈನಾ ಫ್ರೆಂಡ್ಶಿಪ್ ಅಸೋಸಿಯೇಷನ್ ಮುಖೇನ ಈ ಫೆಸ್ಟಿವಲ್ನಲ್ಲಿ ಭಾಗವಹಿ ಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story