ಕುತ್ತಾರು: ಅಕ್ರಮ ಜಾನುವಾರು ಸಾಗಾಟ ಪತ್ತೆ
ಉಳ್ಳಾಲ, ಸೆ. 8: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಮಾರ್ಗ ಮಧ್ಯೆ ಪಿಕಪ್ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಎಲಿಯಾರುಪದವು ಮದಕ ಕಡೆಯಿಂದ ತೊಕ್ಕೊಟ್ಟು ಕಡೆಗೆ ಸಾಗುತ್ತಿದ್ದ ಪಿಕಪ್ ವಾಹನವನ್ನು ಕುತ್ತಾರು ಬಳಿಯಿಂದ ಸಂಘಪರಿವಾರದ ಕಾರ್ಯಕರ್ತರು ಬೆನ್ನಟ್ಟಿದ್ದಾರೆ. ಪಿಕಪ್ ಚಾಲಕ ಚೆಂಬುಗುಡ್ಡೆ ಒಳಮಾರ್ಗವಾಗಿ ತೊಕ್ಕೊಟ್ಟು ತಲುಪಲು ಯತ್ನಿಸುತ್ತಿದ್ದಂತೆ ಕಾರ್ಯಕರ್ತರು ಭಟ್ನಗರ ಸಮೀಪ ಅಡ್ಡಗಟ್ಟಿದ್ದರು.
ಈ ವೇಳೆ ಪಿಕಪ್ನಲ್ಲಿದ್ದ ಮೂವರು ಪರಾರಿಯಾಗಿದ್ದಾರೆ. ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Next Story