ಬೋರ್ವೆಲ್ ಲಾರಿ ಪಲ್ಟಿ: ಓರ್ವನಿಗೆ ಗಾಯ
ಪುತ್ತೂರು, ಅ.19: ಪುತ್ತೂರು ತಾಲೂಕಿನ ಬೆಳಂದೂರು ಗ್ರಾಮದ ಅಗಳಿ ಎಂಬಲ್ಲಿ ಬೋರ್ವೆಲ್ ಲಾರಿಯೊಂದು ಮಗುಚಿ ಬಿದ್ದು, ಲಾರಿಯಲ್ಲಿದ್ದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬೆಳಂದೂರು ಗ್ರಾಮದ ಅಗಳಿ ಎಂಬಲ್ಲಿ ಗುಡ್ಡೆಯನ್ನು ಏರುತ್ತಿದ್ದ ಬೋರ್ವೆಲ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಘಟನೆಯಲ್ಲಿ ಲಾರಿಯಲ್ಲಿದ್ದ ಒಬ್ಬರು ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.
ಬೆಳಂದೂರು ಪ್ರಸ್ತುತ ಬೆಳ್ಳಾರೆ ಠಾಣಾ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದು, ಇಲ್ಲಿನ ಠಾಣೆಗೆ ಈ ಕುರಿತು ಮಾಹಿತಿ ಬಂದಿಲ್ಲ ಎಂದು ಬೆಳ್ಳಾರೆ ಠಾಣಾಧಿಕಾರಿ ಚೆಲುವಯ್ಯ ತಿಳಿಸಿದ್ದಾರೆ.
Next Story