ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಕೋಟ, ನ.7: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರರೊಬ್ಬರು ಬೋಟಿನಿಂದ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಮೂಡಹಡು ಗ್ರಾಮದ ಯಡಬೆಟ್ಟು ನಿವಾಸಿ ಬಾಬು ಮರಕಲ (52) ಎಂದು ಗುರುತಿಸಲಾಗಿದೆ.
ಇವರು ಇತರ ಮೀನುಗಾರ ರೊಂದಿಗೆ ಜೈ ಗುರುದೇವ್ ಬೋಟಿನಲ್ಲಿ ನ.2ರಂದು ಬೆಳಗ್ಗೆ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಹೋಗಿದ್ದು, ನ.6ರಂದು ಬೆಳಗಿನ ಜಾವ ಮೀನುಗಾರಿಕೆ ಮಾಡುತ್ತಿರುವಾಗ ಬಾಬು ಮರಕಾಲ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತ ಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story