ಮೀನುಗಾರ ಮಹಿಳೆಯರ ಅವಹೇಳನ: ವೆಬ್ಸೈಟ್ ವಿರುದ್ಧ ದೂರು ದಾಖಲು
ಮಂಗಳೂರು, ನ.21: ಕೇಂದ್ರ ಸರಕಾರ ಅಮಾನ್ಯಗೊಳಿಸಿದ 500 ಮತ್ತು 1,000 ರೂ. ನೋಟಿನ ವಿಚಾರದಲ್ಲಿ ಪ್ರಕಟಿಸಿದ ವರದಿಯಲ್ಲಿ ಮೀನುಗಾರ ಮಹಿಳೆಯರ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಯೆಯ್ಯಡಿಯ ಅನೂಪ್ ಕಾಂಚನ್ ಎಂಬವರು ‘ದೈಜಿವರ್ಲ್ಡ್’ ವೆಬ್ಸೈಟ್ನ ಮಾಲಕ ಹಾಗೂ ಅದಕ್ಕೆ ಪ್ರತಿಕ್ರಿಯೆ ನೀಡಿದ ಮೂವರು ಓದುಗರ ವಿರುದ್ಧ ಕಾವೂರು ಠಾಣೆಗೆ ದೂರು ನೀಡಿದ್ದಾರೆ.
ಈ ವರದಿಗೆ ಅಶ್ಲೀಲವಾಗಿ ಪ್ರತಿಕ್ರಿಯಿಸಲಾಗಿದ್ದು, ಇದರಿಂದ ಮೀನುಗಾರ ಮಹಿಳೆಯರಿಗೆ ಅವಮಾನವಾಗಿದೆ. ಹಾಗಾಗಿ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story